ಸಹಕಾರ ಗೀತೆ
ಎದ್ದೇಳು ಎದ್ದೇಳು ಸಹಕಾರ ಬಂಧು |
ಇದನೋದು ಸಹಕಾರದ ಧರ್ಮ ಸಿಂಧು ।।ಪ।।
ಬದುಕು ಎಲ್ಲರಿಗಾಗಿ ಭಾಗ್ಯವೆಲ್ಲರಿಗಾಗಿ
ಸರ್ವ ಜನತೆಯ ಸುಖವು ಸಹಕಾರದಿಂದ ।
ಗಳಿಸಿರುವ ಭಾರತದ ಸ್ವಾತಂತ್ರ್ಯವನು ಉಳಿಸಿ
ಬೆಳಸಲ್ಕೆ ಸಹಕಾರ ಕವಿ ದಿವ್ಯವೆಂದ ।।೧।।
ಎದ್ದೇಳು ಎದ್ದೇಳು ಸಹಕಾರ ಬಂಧು ।
ಇದನೋದು ಸಹಕಾರದ ಧರ್ಮ ಸಿಂಧು ।।ಪ।।
ಸಹಕಾರ ಸೋದರರೇ ನಾವೇಲ್ಲರೊಂದಾಗಿ
ಸಹಕಾರಕಾಗಿ ಒಮ್ಮತದಿ ದುಡಿವ ।
ಕರ್ಮಯೋಗವೇ ಧರ್ಮವೆಂದೆಣಿಸಿ ಮುನ್ನಡೆದು
ಈ ನೆಲದಿ ಸುಖಶಾಂತಿಗಳನೂ ಸವಿವ ।।೨।।
ಎದ್ದೇಳು ಎದ್ದೇಳು ಸಹಕಾರ ಬಂಧು ।
ಇದನೋದು ಸಹಕಾರದ ಧರ್ಮ ಸಿಂಧು ।।ಪ।।
ನೆಲ ಜಲವು ರವಿ ಶಶಿಯು ಬಿಸಿಲ ಮಳೆ ಗಾಳಿಗಳು
ಭಾವೈಕ್ಯದಿಂದೆಲ್ಲಾ ಸಹಕರಿಸುತಿಹವು ।
ನಾವು ಸಹಕಾರ ಸತ್ಪದಲ್ಲಿ ಮುನ್ನಡೆದು
ಸಹಕಾರದಿಂದೆಮ್ಮ ಬಾಳ್ವೆ ಸುಖವು ।।೩।।
ಎದ್ದೇಳು ಎದ್ದೇಳು ಸಹಕಾರ ಬಂಧು
ಇದನೋದು ಸಹಕಾರದ ಧರ್ಮ ಸಿಂಧು ।।ಪ।।
ನಮ್ಮ ಮುಂಡಾಜೆ ಸಹಕಾರ ಸಂಘವಿದು
ಸಹಕಾರಿ ಬಂಧುಗಳ ಸಹಜೀವನದ ಮಂತ್ರ ।
ಸರ್ವರಿಗೆ ಸಮ ಪಾಲು ಸರ್ವರಿಗೆ ಸಮ ಬಾಳು
ಸಹಕಾರಕೆಣೆಯಿಲ್ಲ ಈ ಧರೆಯೊಳು ।।೪।।
ಎದ್ದೇಳು ಸಹಕಾರ ಬಂಧು
ಇದನೋದು ಸಹಕಾರದ ಧರ್ಮ ಸಿಂಧು ।।ಪ।।
|| ಸಹಕಾರಂ ಗೆಲ್ಗೆ, “ಜೈ ಸಹಕಾರಿ”||