|| ಸಹಕಾರಂ ಗೆಲ್ಗೆ ||

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ)

Mundaje Primary Agricultural Credit Co-operative Society Ltd.

Reg. No.5609

(ಸಹಕಾರಿಯ ಶೇರುದಾರ ಸದಸ್ಯರ ಮಾಹಿತಿಗಾಗಿ)

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ) || ಸಹಕಾರಂ ಗೆಲ್ಗೆ ||

ಸೋಮ - ಶುಕ್ರ : 09:30 am – 06:00 pm, ಶನಿ : 09:30 am – 02:00 pm

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ)

Mundaje Primary Agricultural Credit Co-operative Society Ltd.

Reg. No.5609

(ಸಹಕಾರಿಯ ಶೇರುದಾರ ಸದಸ್ಯರ ಮಾಹಿತಿಗಾಗಿ)

Call us now!

2023 - 2024 ನೇ ಸಾಲಿನ ಸಂಘದ ನಿವ್ವಳ ಲಾಭ ರೂ 2.05 ಕೋಟಿ - ಜನಾರ್ದನ ಗೌಡ ನೂಜಿ, ಅಧ್ಯಕ್ಷರು || ಶೇ 15 ಡಿವಿಡೆಂಡ್ ಘೋಷಣೆ || ಸತತ 12 ವರ್ಷಗಳಲ್ಲಿ ಎಲ್ಲಾ ಸಾಲಗಳ 100% ಮರುಪಾವತಿ, ನಿರಂತರಲಾಭ, “A” ವರ್ಗದ ಆಡಿಟ್ ವರ್ಗೀಕರಣ. || ಸಹಕಾರಿ ಸಪ್ತಾಹದ ಅಂಗವಾಗಿ ನಮ್ಮ ಗ್ರಾಹಕರಿಗೆ ವಿಶೇಷ ಕೊಡುಗೆಯಾಗಿ ರೂ.2,000/- ಮೇಲ್ಪಟ್ಟ ಖರೀದಿಗೆ ಅದೃಷ್ಟ ಚೀಟಿ, ಹಾಗೂ ರೂ.5,000/- ಖರೀದಿಗೆ ಅದೃಷ್ಟ ಚೀಟಿಯೊಂದಿಗೆ ರೂ.200/- ಗಳ ಉಚಿತ ಕೂಪನ್ ನೀಡಲಾಗುವುದು ಈ ಕೊಡುಗೆ ದಿನಾಂಕ19.11.2023 ರ ವರೆಗೆ ಮಾತ್ರ. ದಿನಾಂಕ: 20.11.2023 ರಂದು ಅದೃಷ್ಟ ಚೀಟಿ ಡ್ರಾ.

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ

ಬೆಳ್ತಂಗಡಿ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ, ಈ ಸಂಸ್ಥೆ 100 ವರ್ಷಗಳ ಸಾರ್ಥಕ ಸೇವೆಯನ್ನು ಸಹಕಾರ ರಂಗದಲ್ಲಿ ಪೂರೈಸಿ, ಶತಮಾನೋತ್ಸವವನ್ನು ಆಚರಿಸಿ ಇದರ ಸವಿನೆನಪಿಗಾಗಿ ಸೋಮಂತ್ತಡ್ಕದಲ್ಲಿ ಶತಮಾನೋತ್ಸವ ಸಂಕೀರ್ಣ "ಮೃತ್ಯುಂಜಯ"ವನ್ನು ಲೋಕಾರ್ಪಣೆಗೊಳಿಸಿದೆ. ಪ್ರಸ್ತುತ ನಮ್ಮ ಸಂಸ್ಥೆ ನಿರಂತರ ಸೇವೆಯೊಂದಿಗೆ 102 ವರ್ಷಗಳನ್ನು ಪೂರೈಸಿರುವುದು ಅಭಿನಂದನೀಯ. ನಮ್ಮ ಸಹಕಾರಿ ಸಂಸ್ಥೆ ನಿರಂತರವಾಗಿ ಸೇವಾ ಚಟುವಟಿಕೆಯಲ್ಲಿ ಗುರುತಿಸಿಕೊಂಡು ತನ್ನ ಸದಸ್ಯ ವರ್ಗಕ್ಕೆ ಅತ್ಯಾಧುನಿಕ ಗುಣಮಟ್ಟದ ಸೇವೆಯನ್ನು ನೀಡಿ ಶತಮಾನೋತ್ಸವವನ್ನು ಆಚರಿಸುವುದು ಸಂಸ್ಥೆಯ ಸೇವಾ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ರೈತಾಪಿ ಸದಸ್ಯರ ಆರ್ಥಿಕ ಅವಶ್ಯಕತೆಗೆ ಸ್ಪಂದಿಸುತ್ತಿರುವ ಈ ಸಂಸ್ಥೆ ಸೇವಾ ಮನೋಭಾವದಿಂದ ಗ್ರಾಹಕರ ಅನುಕೂಲಕ್ಕಾಗಿ ಶತಮಾನೋತ್ಸವದ ಸವಿನೆನಪಿನಲ್ಲಿ ಕೃಷಿಯಂತ್ರೋಪಕರಣ ಮಳಿಗೆ ಆರಂಭಿಸಿದೆ.

molahalli shivaraya
we narayan bhide
bhide narayan bhat

ಅಧ್ಯಕ್ಷರ ಸಂದೇಶ

ಹಿರಿಯ ಸಹಕಾರಿಗಳ ಮಾರ್ಗದರ್ಶನ, ಸದಸ್ಯರ ಭಾಗವಹಿಸುವಿಕೆ, ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಪರಸ್ಪರ ಪ್ರಯತ್ನ, ನಮ್ಮ ಸಂಸ್ಥೆಯ ಅಭಿವೃದ್ದಿಗೆ ಕಾರಣವಾಗಿದೆ. ಶತಮಾನೋತ್ಸವ ಆಚರಿಸಿರುವ ಈ ಸಂಸ್ಥೆಗೆ ದುಡಿದ ನೂರಾರು ಸಹಕಾರಿಗಳನ್ನು, ಸಾವಿರಾರು ಸದಸ್ಯರನ್ನು ನೆನೆಯುವುದು ನನ್ನ ಕರ್ತವ್ಯ. ಸಹಕಾರಿ ಕ್ಷೇತ್ರಕ್ಕೆ(ಆಡಳಿತಕ್ಕೆ) ಹೊಸದಾಗಿ ಪ್ರವೇಶಿಸಿರುತ್ತೇನೆ. ಹಿರಿಯರ ಮಾರ್ಗದರ್ಶನ, ಆಡಳಿತ ಮಂಡಳಿಯವರ ಪ್ರೋತ್ಸಾಹ, ಸಿಬ್ಬಂದಿಗಳ ಕಾರ್ಯಕ್ಷಮತೆಯಿಂದ, ಈ ಸಂಘ ಹೆಮ್ಮರವಾಗಿ ಬೆಳೆದು, ಸಾವಿರಾರು ಮಂದಿಗೆ ನೆರಳಾಗಿದೆ ಎಂದರೆ ಅತಿಶಯೋಕ್ತಿಯಾಗದು. ಸಹಕಾರಿ ತತ್ವಗಳನ್ನು ಅರಿತು, ಸದಸ್ಯರ ಆಶೋತ್ತರಗಳ ಈಡೇರಿಕೆಗೆ ಪ್ರಯತ್ನಿಸುತ್ತೇವೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮಾತಿನಂತೆ, ಎಲ್ಲರೂ ಒಟ್ಟಾಗಿ ದುಡಿಯೋಣ. ಸಂಘದ ಅಭಿವೃದ್ದಿಗೆ ಪಾಲುದಾರರಾಗೋಣ. ಎಲ್ಲರಿಗೂ ಒಳಿತಾಗಲಿ.

|| ಸಹಕಾರಂ ಗೆಲ್ಗೆ, “ಜೈ ಸಹಕಾರಿ”||

ಶ್ರೀ ಜನಾರ್ದನ ಗೌಡ ನೂಜಿ
ಅಧ್ಯಕ್ಷರು

ಸಾಲಗಳು ಮತ್ತು ಮುಂಗಡಗಳು

ಸುದ್ದಿಜಾಲ

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ.) ನೂರರ ಸಂಭ್ರಮ - ಸ್ಮರಣ ಸಂಚಿಕೆ 2021