ಅಧ್ಯಕ್ಷರ ಸಂದೇಶ

ಹಿರಿಯ ಸಹಕಾರಿಗಳ ಮಾರ್ಗದರ್ಶನ, ಸದಸ್ಯರ ಭಾಗವಹಿಸುವಿಕೆ, ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಪರಸ್ಪರ ಪ್ರಯತ್ನ, ನಮ್ಮ ಸಂಸ್ಥೆಯ ಅಭಿವೃದ್ದಿಗೆ ಕಾರಣವಾಗಿದೆ. ಶತಮಾನೋತ್ಸವ ಆಚರಿಸಿರುವ ಈ ಸಂಸ್ಥೆಗೆ ದುಡಿದ ನೂರಾರು ಸಹಕಾರಿಗಳನ್ನು, ಸಾವಿರಾರು ಸದಸ್ಯರನ್ನು ನೆನೆಯುವುದು ನನ್ನ ಕರ್ತವ್ಯ. ಸಹಕಾರಿ ಕ್ಷೇತ್ರಕ್ಕೆ(ಆಡಳಿತಕ್ಕೆ) ಹೊಸದಾಗಿ ಪ್ರವೇಶಿಸಿರುತ್ತೇನೆ. ಹಿರಿಯರ ಮಾರ್ಗದರ್ಶನ, ಆಡಳಿತ ಮಂಡಳಿಯವರ ಪ್ರೋತ್ಸಾಹ, ಸಿಬ್ಬಂದಿಗಳ ಕಾರ್ಯಕ್ಷಮತೆಯಿಂದ, ಈ ಸಂಘ ಹೆಮ್ಮರವಾಗಿ ಬೆಳೆದು, ಸಾವಿರಾರು ಮಂದಿಗೆ ನೆರಳಾಗಿದೆ ಎಂದರೆ ಅತಿಶಯೋಕ್ತಿಯಾಗದು. ಸಹಕಾರಿ ತತ್ವಗಳನ್ನು ಅರಿತು, ಸದಸ್ಯರ ಆಶೋತ್ತರಗಳ ಈಡೇರಿಕೆಗೆ ಪ್ರಯತ್ನಿಸುತ್ತೇವೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮಾತಿನಂತೆ, ಎಲ್ಲರೂ ಒಟ್ಟಾಗಿ ದುಡಿಯೋಣ. ಸಂಘದ ಅಭಿವೃದ್ದಿಗೆ ಪಾಲುದಾರರಾಗೋಣ. ಎಲ್ಲರಿಗೂ ಒಳಿತಾಗಲಿ.

|| ಸಹಕಾರಂ ಗೆಲ್ಗೆ, “ಜೈ ಸಹಕಾರಿ”||

ಶ್ರೀ ಜನಾರ್ದನ ಗೌಡ ನೂಜಿ
ಅಧ್ಯಕ್ಷರು