ಮುನ್ನುಡಿ

ಗುಂಡಿ ಲಕ್ಷ್ಮೀನಾರಾಯಣ ದೇವರ ಸನ್ನಿಧಿಯಲ್ಲಿ 03.04.1921ರಂದು ಹುಟ್ಟಿದ ಮುಂಡಾಜೆ ಸಹಕಾರಿ ಸಂಘದ ಸ್ಥಾಪಕ ಅಧ್ಯಕ್ಷರು N.P. ಖಾಡಿಲ್ಕರ್ ಹಾಗೂ ಸ್ಥಾಪಕ ಗೌರವ ಕಾರ್ಯದರ್ಶಿ ಭಿಡೆ ನಾರಾಯಣ ಭಟ್‍ರವರು ಕೃಷಿಕರಿಗೆ ಸಾಲನೀಡುತ್ತ ಮುಂಡಾಜೆ ಕಲ್ಮಂಜ ಗ್ರಾಮ ವ್ಯಾಪ್ತಿ ಹೊಂದಿದ್ದ ಸಂಸ್ಥೆ ಜಾಗತಿಕ ಮಹಾಯುದ್ಧ ಕಾಲದಲ್ಲಿ “ರೇಶನ್”(ಪಡಿತರ)ಕ್ಕೂ ಪರದಾಡಬೇಕಾದ್ದ ಸ್ಥಿತಿಯಲ್ಲಿದ್ದಾಗ ರೇಶನ್ ಪೂರೈಕೆಯ ಜವಾಬ್ದಾರಿಯನ್ನೂ ಹೊತ್ತಿತ್ತು. 1942-1943ರಿಂದ ಪುನಃ ಚಾರ್ಮಾಡಿ, ಚಿಬಿದ್ರೆ, ತೋಟತ್ತಾಡಿ, ನೆರಿಯಗ್ರಾಮಗಳಿಗೆ ವ್ಯಾಪ್ತಿಯನ್ನು ವಿವಿಧೋದ್ದೇಶ ಸಹಕಾರಿ ಸಂಘವಾಗಿ ವಿಸ್ತರಿಸಿಕೊಂಡು ಬೆಳೆಯಿತು.

1969ರಿಂದ ಮುಂಡಾಜೆ ಸಿ.ಎ. ಬ್ಯಾಂಕ್ ಆಗಿ ಹೆಸರು ಬದಲಿಸಿಕೊಂಡು ಬೆಳೆಯಿತು. ಈಗಲೂ ಸಿ.ಎ. ಬ್ಯಾಂಕ್ ಎಂದೇ ಜನಮಾನಸದಲ್ಲಿ ನೆಲೆಯಾಗಿದೆ. ಮುಂಡಾಜೆ, ನೆರಿಯ, ಕಕ್ಕಿಂಜೆ, ಚಾರ್ಮಾಡಿ, ಕಲ್ಮಂಜ ಸೋಮಂತಡ್ಕಗಳಲ್ಲಿ ಸ್ವಂತ ನಿವೇಶನಗಳಿವೆ. ನೆರಿಯ, ಕಕ್ಕಿಂಜೆ, ಸೋಮಂತಡ್ಕಗಳಲ್ಲಿ ಪೂರ್ಣಪ್ರಮಾಣದ ಶಾಖೆಗಳೂ ಮುಂಡಾಜೆಯಲ್ಲಿ ಕೇಂದ್ರ ಕಛೇರಿ ಇದೆ. ಚಾರ್ಮಾಡಿ ನಿಡ್ಗಲ್‍ಗಳಲ್ಲಿ ಪಡಿತರ ವಿತರಣಾ ಕೇಂದ್ರಗಳಿವೆ. ನಮ್ಮ ಸಂಘವು ಸದಸ್ಯರ ಅಡಿಕೆ, ಕ್ಕೊಕ್ಕೋ ರಬ್ಬರ್ ಖರೀದಿ ಮಾಡುತ್ತಿದೆ. ಕೃಷಿ, ಕೃಷಿಯೇತರ ಹಾಗೂ ಸ್ವಸಹಾಯ ಸಂಘಗಳಿಗೂ ಸಾಲಸೌಲಭ್ಯ ನಿಡುತ್ತಿದೆ. 2012ರ ಅಂತರಾಷ್ಟೀಯ ಸಹಕಾರಿ ವರ್ಷದಲ್ಲಿ ಪ್ರಾರಂಭಿಸಿದ “ಋಣಮುಕ್ತ ಕೃಷಿಕ”ನನ್ನು ಕಾಣುವ ಕನಸಿನೊಂದಿಗೆ ಪ್ರಾರಂಭವಾದ ಕೃಷಿ ಸಾಲ ತೀರುವಳಿ ಯೋಜನೆ (KSTY-2012) ಅತ್ಯಂತ ವೈಶಿಷ್ಯಪೂರ್ಣ ವಾಗಿದ್ದರೂ ಸರಕಾರಗಳ ಬೆಂಬಲವಿಲ್ಲದೆ ಸೊರಗುತಾ ಮುಂದುವರಿದಿದೆ.

ಕೊವಿಡ್-19 ಆರಂಭವಾಗುವ ವರೆಗೂ ಸತತ 7 ವರ್ಷಗಳಲ್ಲಿ ಎಲ್ಲಾಸಾಲಗಳ 100% ವಸೂಲಾತಿ, ನಿರಂತರಲಾಭ, “A” ವರ್ಗದ ಆಡಿಟ್ ವರ್ಗೀಕರಣ ಈ ಸಂಘದ ಸಾಧನೆ.

ಸಂಘದ ಸಾಧನೆಯ ಪಕ್ಷಿನೋಟ

ದಿನಾಂಕ 16.01.1921ರಲ್ಲಿ ನೋಂದಾಯಿತಗೊಂಡದ್ದು ದಿನಾಂಕ 03.04.1921ರಲ್ಲಿ ಮುಂಡಾಜೆ ವ್ಯವಸಾಯಿಕ ಸಂಘವಾಗಿ ಗುಂಡಿ ಲಕ್ಷ್ಮೀನಾರಾಯಣ ದೇವಸ್ಥಾನದ ಹೊರಚಾವಡಿಯಲ್ಲಿ ಆರಂಭಗೊಂಡಿತು. ಈ ಸಂಘವು ಮುಂಡಾಜೆ ಹಾಗೂ ಕಲ್ಮಂಜ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿತ್ತು.

ಸ್ಥಾಪಕಾಧ್ಯಕ್ಷರು : ಗುಂಡಿ ನಾರಾಯಣ ಪದ್ಮನಾಭ ಖಾಡಿಲ್ಕಾರ್,
ಕಾರ್ಯದರ್ಶಿ : ಭಿಡೆ ನಾರಾಯಣ ಭಟ್,
ಸ್ಥಾಪಕ ಸಮಿತಿಯ ಇತರ ಸದಸ್ಯರುಗಳು : (1) ಮಾಣಿ ಅನಂತ ಭಟ್, (2) ಎಚ್.ಬಿ. ಪಟವರ್ಧನ್, (3) ಕೆ.ಜಿ. ನರಸಿಂಹ ಭಟ್
ಸ್ಥಾಪನೆಗೆ ಸಹಕರಿಸಿದ ಇತರ ಮಹನೀಯರು : ಗುದ್ಲಿ ವೆಂಕಟೇಶ ಭಟ್, ಧುಂಬೆಟ್ಟು ಮಹಾದೇವ ಹೆಬ್ಬಾರ್, ಶೇಷ ಭಟ್ ಭಿಡೆ, ಮಾಣಿ ಗಣಪತಿ ಭಟ್ , ಬಿಡೆ ಪದ್ಮನಾಭ ಭಟ್, ಎಮ್ ಎನ್. ಭಿಡೆ.

1933-36ರ ವರೆಗೆ ಗೋರೆ ಅನಂತ ಭಟ್ ಅಧ್ಯಕ್ಷರಾಗಿ ಹಾಗೂ M. ಸುಬ್ರಾಯ ಭಟ್ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುತ್ತಾರೆ. ಈ ಕಾಲದಲ್ಲಿ ಸಂಘಕ್ಕೆ ಸ್ವಂತ ಕಟ್ಟಡ ಇರಲಿಲ್ಲ. ನೌಕರರೂ ಇರಲಿಲ್ಲ. ಎಲ್ಲವೂ ಗೌರವಾನ್ವಿತ ರೀತಿಯಲ್ಲಿ ನಡೆಯುತ್ತಿತ್ತು. ಯುದ್ಧದ ದೆಸೆಯಿಂದ ಹಾಗೂ ಕೊಳೆರೋಗದಿಂದಾಗಿ ಅಡಿಕೆ ತೋಟಗಾರರು ಭೀಕರ ಸಂಕಷ್ಟವನ್ನೆದುರಿಸಬೇಕಾಯಿತು. ಆಗ ಇವರನ್ನು ಆರ್ಥಿಕವಾಗಿ ಸಂರಕ್ಷಿಸಿದ್ದು ಈ ಸಂಘವೇ ಆಗಿದೆ. 1921-45ರವರೆಗೆ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರು ನಮ್ಮ ಸಂಘದ ನಿರಂತರ ಸಂಪರ್ಕದಲ್ಲಿದ್ದರು. ಭಿಡೆ ಮನೆತನದ ಜಿ.ಯನ್ ಭಿಡೆಯವರು ಉಚಿತವಾಗಿ ನೀಡಿದ ನಿವೇಶನದಲ್ಲಿ ಸ್ವಂತ ಕಟ್ಟಡವನ್ನು ಕಟ್ಟಿ 1942ರಲ್ಲಿ ಮೊಳಹಳ್ಳಿ ಶಿವರಾಯರು ಉದ್ಘಾಟಿಸಿದ್ದು ಇತಿಹಾಸ. 1960ರಲ್ಲಿ ರತ್ನವರ್ಮಹೆಗ್ಗಡೆಯವರು ತೋಟತ್ತಾಡಿಯಲ್ಲಿ ಉಚಿತವಾಗಿ ಕೊಟ್ಟ ನಿವೇಶನದಲ್ಲಿ ಗೋದಾಮು ನಿರ್ಮಾಣವಾಯಿತು. ಒ.ಉ ಫಡ್ಕೆಯವರ ಆಡಳಿತಾವಧಿಯಲ್ಲಿ 100ಟನ್ ಶೇಖರಣಾ ಸಾಮಥ್ಯದ ಗೋದಾಮನ್ನು ನಿರ್ಮಿಸಲಾಯಿತು. 1973ರಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಲಾಯಿತು. ದಿನಾಂಕ 06- 02-1983ರಲ್ಲಿ ಕಕ್ಕಿಂಜೆಯಲ್ಲಿ ಪ್ರಥಮವಾಗಿ ಸರಕಾರದ ಯನ್ ಆರ್.ಇ.ಪಿ. (NREP) ಯೋಜನೆಯಲ್ಲಿ ಸರಕಾರ ದಿಂದ ಮಂಜುರಾಗಿರುವ 0.30 ಸೆಂಟ್ಸ್ ವಿಸ್ತೀರ್ಣದ ನಿವೇಶನದಲ್ಲಿ ಸ್ವಂತ ಕಟ್ಟಡ ನಿರ್ಮಾಣಗೊಂಡಿತು. ಅದೇ ಕಟ್ಟಡದಲ್ಲಿ ಚಾರ್ಮಾಡಿ, ಚಿಬಿದ್ರೆ, ತೋಟತ್ತಾಡಿ ನೆರಿಯ ಗ್ರಾಮದ ಸದಸ್ಯರಿಗೆ ಅನುಕೂಲವಾಗುವಂತೆ ಶಾಖೆ ಪ್ರಾರಂಭವಾಯಿತು.

ಪ್ರಧಾನ ಕಛೇರಿಯ ವ್ಯವಹಾರವು ಮುಂಡಾಜೆಯ ಹಳೆ ಕಟ್ಟಡದಲ್ಲಿ ನಡೆಯುತ್ತಿದ್ದು, ವ್ಯವಹಾರದ ಅನುಕೂಲತೆಗಾಗಿ ಯನ್.ಸಿ.ಡಿ.ಸಿ (NCDC) ಯೋಜನೆಯಲ್ಲಿ ಕಛೇರಿ ಗೋದಾಮು ಕಟ್ಟಡ ನಿರ್ಮಾಣವಾಗಿ ದಿನಾಂಕ 18- 05-1988ರಲ್ಲಿ ಉದ್ಘಾಟನೆಗೊಂಡಿತು. ಸದಸ್ಯರ ಅನುಕೂಲತೆಗಾಗಿ ಸಂಘದ ಮೂಲಕ 26-11-1990ರಲ್ಲಿ ಕ್ಯಾಂಪ್ಕೋದವರು ವಾರದಲ್ಲೋಮ್ಮೆ ಅಡಿಕೆ ಹಾಗೂ ಕೊಕ್ಕೋ ಖರೀದಿ ಆರಂಭಿಸಿದ್ದಾರೆ. ನೆರಿಯ ಗ್ರಾಮದಲ್ಲಿ ವ್ಯವಹಾರ ಅಭಿವೃದ್ಧಿಗೆ ಅವಕಾಶ ಇರುವುದನ್ನು ಮನಗಂಡು 1997ರಲ್ಲಿ ಬಾಡಿಗೆ ಕಟ್ಟಡದಲ್ಲಿ ಭಾಗಶಃ ವ್ಯವಹಾರ ಪ್ರಾರಂಭವಾಗಿದೆ. ಅದೇ ಗ್ರಾಮದಲ್ಲಿ ಸ್ವಂತ ನಿವೇಶನಕ್ಕಾಗಿ ಅಂದಿನ ನಿರ್ದೇಶಕರಾಗಿದ್ದ ಶಾಂತಪ್ಪ ಗೌಡ ರವರ ಸ್ವಾಧೀನತೆಯಲ್ಲಿದ್ದ ಸ್ಥಳವನ್ನು ನಿರಾಪೇಕ್ಷಣಿ ಪತ್ರದ ಮೂಲಕ 0.10 ಸೆಂಟ್ಸ್ ನಿವೇಶನವನ್ನು ಸಂಘದ ಹೆಸರಿಗೆ ಮಂಜೂರಾಗಿ, ಸ್ವಂತ ಸಂಪನ್ಮೂಲದಿಂದ ಕಛೇರಿ ಗೋದಾಮುಕಟ್ಟಡ ನಿರ್ಮಾಣವಾಗಿ ದಿನಾಂಕ 17-05-2005ರಂದು ಉದ್ಘಾಟನೆಗೊಂಡು ವ್ಯವಹಾರವು ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ.

ಸದಸ್ಯರಿಗೆ ಅನುಕೂಲವಾಗುವಂತೆ ರಬ್ಬರ್ ಬೆಳೆಗಾರರ ಸಹಕಾರಿ ಮಾರಾಟ ಸಂಘ ಉಜಿರೆಯ ಮೂಲಕ ನೆರಿಯ ಶಾಖೆಯಲ್ಲಿ ದಿನಾಂಕ 17-05-2005 ರಬ್ಬರ್ ಖರೀದಿ ಆರಂಭಿಸಲಾಯಿತು. ಸದಸ್ಯರಿಗೆ ಅನುಕೂಲವಾಗುವಂತೆ ರಬ್ಬರ್ ಬೆಳೆಗಾರರ ಸಹಕಾರಿ ಮಾರಾಟ ಸಂಘ ಉಜಿರೆಯ ಮೂಲಕ ಕಕ್ಕಿಂಜೆ ಶಾಖೆಯಲ್ಲಿಯೂ ಮತ್ತೆ ರಬ್ಬರ್ ಖರೀದಿ ಆರಂಭಿಸಲಾಯಿತು. ಸದಸ್ಯರ ಅನುಕೂಲತೆಯ ದೃಷ್ಟಿಯಿಂದ ದಿನಾಂಕ 31-03-2011ರಂದು ಮುಂಡಾಜೆ ಹಾಲು ಉತ್ಪಾದಕರ ಸಹಕಾರ ಸಂಘ (ನಿಯಮಿತ) “ಕಾಮಧೇನು” ಕಟ್ಟಡದ ಒಂದು ಭಾಗವನ್ನು ಬಾಡಿಗೆ ರೂಪದಲ್ಲಿ ಪಡಕೊಂಡು ಪ್ರಧಾನ ಕಛೇರಿಯಲ್ಲಿ ಕೆಲವೊಂದು ವ್ಯವಹಾರವನ್ನು ಉಳಿಸಿಕೊಂಡು “ಠೇವಣಿ, ಸಾಲದ ಖಾತೆ ಇತ್ಯಾದಿ ವ್ಯವಹಾರ ಸ್ಥಳಾಂತರಗೊಂಡಿದೆ. ಅಂತರಾಷ್ಟ್ರೀಯ ಸಹಕಾರಿ ವರ್ಷದ 2012ರ ವಿಶೇಷ ಕೊಡುಗೆಯಾಗಿ ಕೃಷಿಕ ಸದಸ್ಯರ “ಕೃಷಿ ಸಾಲ ತೀರುವಳಿ” ಯೋಜನೆ ಅನುಷ್ಟಾನಗೊಂಡಿತು. ಕಕ್ಕಿಂಜೆಯಲ್ಲಿ ವ್ಯವಹಾರವು ಅಭಿವೃದ್ಧಿ ಹೊಂದಿರುವುದರಿಂದ ಸುಸಜ್ಜಿತ ಹೊಸ ಕಟ್ಟಡದ ಅವಶ್ಯಕತೆ ಕಂಡುಬಂದು ಸದ್ರಿ ನಿವೇಶನದಲ್ಲಿ ಯನ್.ಸಿ.ಡಿ.ಸಿ. (NCDC) ಯೋಜನೆಯಲ್ಲಿ “ಗೋದಾಮು ಮತ್ತು ಕಾರ್ಯದರ್ಶಿ ವಸತಿಗೃಹ ಶಾಖಾ ಕಛೇರಿ”ಗೆ ಅನುಕೂಲವಾಗುವಂತೆ ಕಟ್ಟಡ ನಿರ್ಮಾಣವಾಗಿ ದಿನಾಂಕ 02-03-2014 ಉದ್ಘಾಟನೆಗೊಂಡು, ಹಳೆಯ ಯನ್‍ಆರ್‍ಇಪಿ ಕಟ್ಟಡದಿಂದ ಹೊಸಕಟ್ಟಡಕ್ಕೆ ಸ್ಥಳಾಂತರಗೊಂಡು ವ್ಯವಹಾರ ನಿರ್ವಹಿಸುತ್ತಿದ್ದೇವೆ. ಅಖಿಲ ಭಾರತ ಸಹಕಾರಿ ಸಪ್ತಾಹ 2016ರಲ್ಲಿ ಸಂಘವು ಸದಸ್ಯರಿಗೆ “ಪಿಂಚಣಿ ಯೊಜನೆಯನ್ನು ಅನುಷ್ಟಾನ ಗೊಳಿಸಿದೆ. ಸದಸ್ಯರ ಅನುಕೂಲತೆಗಾಗಿ ಕಲ್ಮಂಜ ಗ್ರಾಮದ ನಿಡ್ಗಲ್‍ನಲ್ಲೂ ಶಾಖೆ ಆರಂಭಿಸಿದ್ದು ಪ್ರಕೃತ ಕಲ್ಮಂಜ ಪಂಚಾಯತ್ ಕಟ್ಟಡದಲ್ಲಿ ವ್ಯವಹಾರ ನಡೆಸುತ್ತಿದೆ. ಕೋವಿಡ್ ಸಂದರ್ಭದಲ್ಲಿ ನಮ್ಮ ಗ್ರಾಮದಲ್ಲಿ ದುಡಿದ ಆಶಾಕಾರ್ಯಕರ್ತೆ (ಕೋವಿಡ್ ವಾರಿಯರ್ಸ್) ಇವರನ್ನು ಸಂಘದ ಮೂಲಕ ಸನ್ಮಾನಿಸಲಾಯಿತು.

ಮುಂಡಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವದ ಸವಿನೆನಪಿನಲ್ಲಿ “ಆತ್ಮನಿರ್ಭರ ಭಾರತ” ಪರಿಕಲ್ಪನೆಯಡಿಯಲ್ಲಿ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ “ಉದ್ಯೋಗ ನೈಪುಣ್ಯ ತರಬೇತಿ’ ಶಿಬಿರವು ವಿವೇಕಾನಂದ ವಿದ್ಯಾವರ್ಥಕ ಸಂಘ ಮುಂಡಾಜೆ ಇದರ ವಠಾರದಲ್ಲಿ ಹಾಗೂ ಸಹಭಾಗಿತ್ವದಲ್ಲಿ ದಿನಾಂಕ 18-12- 2020ರಿಂದ 23-12-2020ರವರೆಗೆ ನಡೆಯಿತು. ಈ ಕೆಳಗಿನ ವಿಷಯಗಳಲ್ಲಿ ಕೌಶಲ್ಯ ತರಬೇತಿ ನಿಡಲಾಯಿತು.

ನಮ್ಮ ಸಂಘವು ದಿನೇದಿನೇ ಪ್ರಗತಿ ಪಥದಲ್ಲಿ ಅಭಿವೃದ್ಧಿಗೊಳ್ಳುತ್ತಿದ್ದು ಇದಕ್ಕೆ ಪೂರಕವಾಗಿ ಸದಸ್ಯರಿದ್ದಲ್ಲಿಗೇ ಬಂದು ಒಂದು ಸುಸಜ್ಜಿತ ಕಟ್ಟಡ ನಿರ್ಮಿಸುವ ಸಂಕಲ್ಪ ಮಾಡಲಾಯಿತು. 22-10-2018ರಂದು ಆಗಿನ ಆಡಳಿತ ಮಂಡಳಿಯು ಹೆದ್ದಾರಿಯ ಬದಿಯಲ್ಲಿ ಸೂಕ್ತ ನಿವೇಶನವನ್ನು ಖರೀದಿಸುವ ಬಗ್ಗೆ ನಿರ್ಣಯಕೈಗೊಂಡಿತು. ಸೋಮಂತಡ್ಕದಲ್ಲಿ ಪ್ರಶಸ್ತ ಸ್ಥಳದಲ್ಲಿ ರಾಷ್ಟೀಯ ಹೆದ್ದಾರಿಯ ಪಕ್ಕದಲ್ಲೇ 0.23 ಸೆಂಟ್ಸ್ ನಿವೇಶನ ಲಭ್ಯವಾಗಿದ್ದು ಸದ್ರಿ ನಿವೇಶನವನ್ನು 2019ರಲ್ಲಿ ಖರೀದಿಸಲಾಯಿತು. ಸುಸಜ್ಜಿತ ಹೊಸ ಕಟ್ಟಡದ ನಿರ್ಮಾಣಕ್ಕೆ 12-12-2019ರ ಗುರುವಾರ ಶಂಕುಸ್ಥಾಪನೆ ಮಾಡಲಾಯಿತು. ಇಂದು ತಾರೀಕು 21-02-2021ರಂದು ಪೂರ್ಣಗೊಂಡ ಈ ಹೊಸ ಸುಸಜ್ಜಿತ ಕಟ್ಟಡ “ಶತಮಾನೋತ್ಸವ ಸಂಕೀರ್ಣ” ಲೋಕಾರ್ಪಣೆ ಗೊಂಡಿದೆ.

ಸಂಘವು ನಬಾರ್ಡ ಪ್ರಾಯೋಜಿತ 4 ರೈತ ಸೇವಾ ಕೂಟಗಳನ್ನು ಸ್ಥಾಪಿಸಿದ್ದು ಅವು ಈ ಕೆಳಗಿನಂತಿವೆ. ಅನುಗ್ರಹ ರೈತ ಸೇವಾ ಕೂಟ (ಚಾರ್ಮಾಡಿ ಪಂಚಾಯತ್ ಕ್ಷೇತ್ರ ಅಧ್ಯಕ್ಷರಾಗಿ ಡಿ.ಎ ರೆಹಿಮನ್), ಸಂಪದ ರೈತಸೇವಾಕೂಟ (ನೆರಿಯ ಪಂಚಾಯತ್ ಕ್ಷೇತ್ರಅಧ್ಯಕ್ಷರಾಗಿ ಬಾಲಕೃಷ್ಣ ಗೌಡ, ಸಂಗಮ ರೈತ ಸೇವಾ ಕೂಟ (ಕಲ್ಮಂಜ ಪಂಚಾಯತ್ ಕ್ಷೇತ್ರ - ಅದ್ಯಕ್ಷರಾಗಿ ಟಿ ಸತೀಶ್), ಮೃತ್ಯುಂಜಯ ರೈತ ಸೇವಾಕೂಟ (ಮುಂಡಾಜೆ ಪಂಚಾಯತ್ ಕ್ಷೇತ್ರ- ಅಧ್ಯಕ್ಷರಾಗಿ ಕಂಠೀರವ ನವಾಥೆ) ಕರ್ತವ್ಯ ನಿರ್ವಹಿಸುತ್ತಿವೆ.

ಪ್ರತಿ ವರ್ಷವೂ ನಿಗದಿತ ಸಮಯದಲ್ಲಿ ಸರ್ವಸದಸ್ಯರ ಮಹಾ ಸಭೆಯನ್ನು ಏರ್ಪಡಿಸಲಾಗುತ್ತದೆ. ಸದ್ರಿ ಸಭೆಯಲಿ ಚರ್ಚಿತ ವಿಷಯಗಳನ್ನು ದಾಖಲಿಸಿ ಅನುಷ್ಠಾನ ಗೊಳಿಸಲಾಗುತ್ತದೆ.

ಸ್ವಚ್ಛತೆ-ನೆಲ-ಜಲ-ಪರಿಸರಗಳ ಬಗ್ಗೆ ಕಾಳಜಿಯನ್ನು ಹೊಂದಿರುವ ನಾವು ಪ್ರತಿವರ್ಷವು ಆಯಾಯ ಋತುಮಾನಗಳಲ್ಲಿ ಇವುಗಳ ರಕ್ಷಣೆಯ ಬಗ್ಗೆ ವಿಭಿನ್ನ- ವಿಶಿಷ್ಟ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದೇವೆ.

***

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ

100 ವರ್ಷಗಳ ಅಭಿವೃದ್ಧಿ ಪಥದ ಒಂದು ಪಕ್ಷಿನೋಟ

ತುಲನಾತ್ಮಕ ಅಭಿವೃದಿ ತಃಖ್ತೆ (ರೂ-ಗಳಲ್ಲಿ)

ವರುಷ ಸದಸ್ಯರು ಪಾಲು
ಬಂಡವಾಳ
ಠೇವಣಾತಿಗಳು ಕೇ. ಸ. ಬೇ
ಸಾಲ
ಸ. ಹೊ ಬೇ
ಸಾಲ
ಲಾಭ- ನಷ್ಟ ಆಡಿಟ್
ವರ್ಗೀಕರಣ
1921-50 107 2169 15105 27721 27188 341  
1951-80 1491 327776 348778 1125855 1628148 34811  
1981-91 1539 1255000 3656104.17 2444258 5227933 50161.71  
1992-2000 1810 3600000 27002898.29 9078753.00 29696793 508497.68  
2001-2010 2873 8737920 139653487 54497236 139653487 4072573.10 A
2011-2015 3810 22797420 289602710.81 129869750 364311785 5161528.47 A
2016 4293 26453520 343134485.2 123081375 410858632 5714067.54 A
2017 4600 28955618 373494855.25 118917712 420412569 6166074.49 A
2018 4900 36576193 409309765.7 207447600 497504338 6332304.67 A
2019 5177 40082413 431778112.3 182570176 535841352 7389659.93 A
2020 5436 43635018 476096921.49 200311208 580623598 8400796.09 A
2021 5667 51631263 531520109.00 279689680 687671813 10052186.67 A
2022 6203 55489483 592749969.00 287929975 774101906 16079923.17 A
2023 6287 61562895 645543236.50 317230433 856592045 18530774.27 A

ಪಕ್ಷಿನೋಟ

  • ಆರಂಭ

    ಗುಂಡಿ ಲಕ್ಷ್ಮೀನಾರಾಯಣ ದೇವರ ಸನ್ನಿಧಿಯಲ್ಲಿ 03.04.1921ರಂದು ಹುಟ್ಟಿದ ಮುಂಡಾಜೆ ಸಹಕಾರಿ ಸಂಘದ ಸ್ಥಾಪಕ ಅಧ್ಯಕ್ಷರು N.P. ಖಾಡಿಲ್ಕರ್ ಹಾಗೂ ಸ್ಥಾಪಕ ಗೌರವ ಕಾರ್ಯದರ್ಶಿ ಭಿಡೆ ನಾರಾಯಣ ಭಟ್.
    ಕಾರ್ಯದರ್ಶಿ: ಭಿಡೆ ನಾರಾಯಣ ಭಟ್
    ಸ್ಥಾಪಕ ಸಮಿತಿಯ ಇತರ ಸದಸ್ಯರುಗಳು:
    1. ಮಾಣಿ ಅನಂತ ಭಟ್
    2. ಎಚ್.ಬಿ. ಪಟವರ್ಧನ್
    3. ಕೆ.ಜಿ. ನರಸಿಂಹ ಭಟ್

    1921

  • ಗೋದಾಮು ನಿರ್ಮಾಣ

    ರತ್ನವರ್ಮಹೆಗ್ಗಡೆಯವರು ತೋಟತ್ತಾಡಿಯಲ್ಲಿ ಉಚಿತವಾಗಿ ಕೊಟ್ಟ ನಿವೇಶನದಲ್ಲಿ ಗೋದಾಮು ನಿರ್ಮಾಣವಾಯಿತು.

    1960

  • ಸಿ.ಎ. ಬ್ಯಾಂಕ್

    1969ರಿಂದ ಮುಂಡಾಜೆ ಸಿ.ಎ. ಬ್ಯಾಂಕ್ ಆಗಿ ಹೆಸರು ಬದಲಿಸಿಕೊಂಡು ಬೆಳೆಯಿತು. ಈಗಲೂ ಸಿ.ಎ. ಬ್ಯಾಂಕ್ ಎಂದೇ ಜನಮಾನಸದಲ್ಲಿ ನೆಲೆಯಾಗಿದೆ. ಮುಂಡಾಜೆ, ನೆರಿಯ, ಕಕ್ಕಿಂಜೆ, ಚಾರ್ಮಾಡಿ, ಕಲ್ಮಂಜ ಸೋಮಂತಡ್ಕಗಳಲ್ಲಿ ಸ್ವಂತ ನಿವೇಶನಗಳಿವೆ. ನೆರಿಯ, ಕಕ್ಕಿಂಜೆ, ಸೋಮಂತಡ್ಕಗಳಲ್ಲಿ ಪೂರ್ಣಪ್ರಮಾಣದ ಶಾಖೆಗಳೂ ಮುಂಡಾಜೆಯಲ್ಲಿ ಕೇಂದ್ರ ಕಛೇರಿ ಇದೆ. ಚಾರ್ಮಾಡಿ ನಿಡ್ಗಲ್‍ಗಳಲ್ಲಿ ಪಡಿತರ ವಿತರಣಾ ಕೇಂದ್ರಗಳಿವೆ. ನಮ್ಮ ಸಂಘವು ಸದಸ್ಯರ ಅಡಿಕೆ, ಕ್ಕೊಕ್ಕೋ ರಬ್ಬರ್ ಖರೀದಿ ಮಾಡುತ್ತಿದೆ. ಕೃಷಿ, ಕೃಷಿಯೇತರ ಹಾಗೂ ಸ್ವಸಹಾಯ ಸಂಘಗಳಿಗೂ ಸಾಲಸೌಲಭ್ಯ ನಿಡುತ್ತಿದೆ.

    1969

  • ಸುವರ್ಣ ಮಹೋತ್ಸವ

    1973ರಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಲಾಯಿತು. ದಿನಾಂಕ 06- 02-1983ರಲ್ಲಿ ಕಕ್ಕಿಂಜೆಯಲ್ಲಿ ಪ್ರಥಮವಾಗಿ ಸರಕಾರದ ಯನ್ ಆರ್.ಇ.ಪಿ. (NREP) ಯೋಜನೆಯಲ್ಲಿ ಸರಕಾರ ದಿಂದ ಮಂಜುರಾಗಿರುವ 0.30 ಸೆಂಟ್ಸ್ ವಿಸ್ತೀರ್ಣದ ನಿವೇಶನದಲ್ಲಿ ಸ್ವಂತ ಕಟ್ಟಡ ನಿರ್ಮಾಣಗೊಂಡಿತು. ಅದೇ ಕಟ್ಟಡದಲ್ಲಿ ಚಾರ್ಮಾಡಿ, ಚಿಬಿದ್ರೆ, ತೋಟತ್ತಾಡಿ ನೆರಿಯ ಗ್ರಾಮದ ಸದಸ್ಯರಿಗೆ ಅನುಕೂಲವಾಗುವಂತೆ ಶಾಖೆ ಪ್ರಾರಂಭವಾಯಿತು.

    1983

  • ಗೋದಾಮು ಕಟ್ಟಡ

    ಪ್ರಧಾನ ಕಛೇರಿಯ ವ್ಯವಹಾರವು ಮುಂಡಾಜೆಯ ಹಳೆ ಕಟ್ಟಡದಲ್ಲಿ ನಡೆಯುತ್ತಿದ್ದು, ವ್ಯವಹಾರದ ಅನುಕೂಲತೆಗಾಗಿ ಯನ್.ಸಿ.ಡಿ.ಸಿ (NCDC) ಯೋಜನೆಯಲ್ಲಿ ಕಛೇರಿ ಗೋದಾಮು ಕಟ್ಟಡ ನಿರ್ಮಾಣವಾಗಿ ದಿನಾಂಕ 18- 05-1988ರಲ್ಲಿ ಉದ್ಘಾಟನೆಗೊಂಡಿತು.

    1988

  • ಕ್ಯಾಂಪ್ಕೋ

    ಸದಸ್ಯರ ಅನುಕೂಲತೆಗಾಗಿ ಸಂಘದ ಮೂಲಕ 26-11-1990ರಲ್ಲಿ ಕ್ಯಾಂಪ್ಕೋದವರು ವಾರದಲ್ಲಿ 2 ದಿನ (ಸೋಮವಾರ ಹಾಗೂ ಬುಧವಾರ)ಅಡಿಕೆ ಹಾಗೂ ಕೊಕ್ಕೋ ಖರೀದಿ ಆರಂಭಿಸಿದ್ದು. ನೆರಿಯ ಗ್ರಾಮದಲ್ಲಿ ವ್ಯವಹಾರ ಅಭಿವೃದ್ಧಿಗೆ ಅವಕಾಶ ಇರುವುದನ್ನು ಮನಗಂಡು 1997ರಲ್ಲಿ ಬಾಡಿಗೆ ಕಟ್ಟಡದಲ್ಲಿ ಭಾಗಶಃ ವ್ಯವಹಾರ ಆರಂಭಿಸಲಾಯಿತು.

    1990

  • ನೆರಿಯ ಗ್ರಾಮದಲ್ಲಿ ಕಛೇರಿ ಗೋದಾಮುಕಟ್ಟಡ ನಿರ್ಮಾಣ

    ನೆರಿಯ ಗ್ರಾಮದಲ್ಲಿ ಸ್ವಂತ ನಿವೇಶನಕ್ಕಾಗಿ ಅಂದಿನ ನಿರ್ದೇಶಕರಾಗಿದ್ದ ಶಾಂತಪ್ಪ ಗೌಡ ರವರ ಸ್ವಾಧೀನತೆಯಲ್ಲಿದ್ದ ಸ್ಥಳವನ್ನು ನಿರಾಪೇಕ್ಷಣಿ ಪತ್ರದ ಮೂಲಕ 0.10 ಸೆಂಟ್ಸ್ ನಿವೇಶನವನ್ನು ಸಂಘದ ಹೆಸರಿಗೆ ಮಂಜೂರಾಗಿ, ಸ್ವಂತ ಸಂಪನ್ಮೂಲದಿಂದ ಕಛೇರಿ ಗೋದಾಮುಕಟ್ಟಡ ನಿರ್ಮಾಣವಾಗಿ ದಿನಾಂಕ 17-05-2005ರಂದು ಉದ್ಘಾಟನೆಗೊಂಡು ವ್ಯವಹಾರವು ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ.

    2005

  • ನೆರಿಯ ಗ್ರಾಮದಲ್ಲಿ ಕಛೇರಿ ಗೋದಾಮುಕಟ್ಟಡ ನಿರ್ಮಾಣ

    ನೆರಿಯ ಗ್ರಾಮದಲ್ಲಿ ಸ್ವಂತ ನಿವೇಶನಕ್ಕಾಗಿ ಅಂದಿನ ನಿರ್ದೇಶಕರಾಗಿದ್ದ ಶಾಂತಪ್ಪ ಗೌಡ ರವರ ಸ್ವಾಧೀನತೆಯಲ್ಲಿದ್ದ ಸ್ಥಳವನ್ನು ನಿರಾಪೇಕ್ಷಣಿ ಪತ್ರದ ಮೂಲಕ 0.10 ಸೆಂಟ್ಸ್ ನಿವೇಶನವನ್ನು ಸಂಘದ ಹೆಸರಿಗೆ ಮಂಜೂರಾಗಿ, ಸ್ವಂತ ಸಂಪನ್ಮೂಲದಿಂದ ಕಛೇರಿ ಗೋದಾಮುಕಟ್ಟಡ ನಿರ್ಮಾಣವಾಗಿ ದಿನಾಂಕ 17-05-2005ರಂದು ಉದ್ಘಾಟನೆಗೊಂಡು ವ್ಯವಹಾರವು ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ.

    ಸದಸ್ಯರಿಗೆ ಅನುಕೂಲವಾಗುವಂತೆ ರಬ್ಬರ್ ಬೆಳೆಗಾರರ ಸಹಕಾರಿ ಮಾರಾಟ ಸಂಘ ಉಜಿರೆಯ ಮೂಲಕ ನೆರಿಯ ಶಾಖೆಯಲ್ಲಿ ದಿನಾಂಕ 17-05-2005 ರಬ್ಬರ್ ಖರೀದಿ ಆರಂಭಿಸಲಾಯಿತು. ಸದಸ್ಯರಿಗೆ ಅನುಕೂಲವಾಗುವಂತೆ ರಬ್ಬರ್ ಬೆಳೆಗಾರರ ಸಹಕಾರಿ ಮಾರಾಟ ಸಂಘ ಉಜಿರೆಯ ಮೂಲಕ ಕಕ್ಕಿಂಜೆ ಶಾಖೆಯಲ್ಲಿಯೂ ಮತ್ತೆ ರಬ್ಬರ್ ಖರೀದಿ ಆರಂಭಿಸಲಾಯಿತು.

    2005

  • ಗೋದಾಮು ಮತ್ತು ಕಾರ್ಯದರ್ಶಿ ವಸತಿಗೃಹ

    ಕಕ್ಕಿಂಜೆಯಲಿ ಯನ್.ಸಿ.ಡಿ.ಸಿ. (NCDC) ಯೋಜನೆಯಲ್ಲಿ “ಗೋದಾಮು ಮತ್ತು ಕಾರ್ಯದರ್ಶಿ ವಸತಿಗೃಹ ಶಾಖಾ ಕಛೇರಿ”ಗೆ ಅನುಕೂಲವಾಗುವಂತೆ ಕಟ್ಟಡ ನಿರ್ಮಾಣವಾಗಿ ದಿನಾಂಕ 02-03-2014 ಉದ್ಘಾಟನೆ.

    2014

  • "ಶತಮಾನೋತ್ಸವ ಸಂಕೀರ್ಣ"

    ಸೋಮಂತಡ್ಕದಲ್ಲಿ ಪ್ರಶಸ್ತ ಸ್ಥಳದಲ್ಲಿ ರಾಷ್ಟೀಯ ಹೆದ್ದಾರಿಯ ಪಕ್ಕದಲ್ಲೇ 0.23 ಸೆಂಟ್ಸ್ ನಿವೇಶನ ಲಭ್ಯವಾಗಿದ್ದು ಸದ್ರಿ ನಿವೇಶನವನ್ನು 2019ರಲ್ಲಿ ಖರೀದಿಸಲಾಯಿತು. ಸುಸಜ್ಜಿತ ಹೊಸ ಕಟ್ಟಡದ ನಿರ್ಮಾಣಕ್ಕೆ 12-12-2019ರ ಗುರುವಾರ ಶಂಕುಸ್ಥಾಪನೆ ಮಾಡಲಾಯಿತು. ಇಂದು ತಾರೀಕು 21-02-2021ರಂದು ಪೂರ್ಣಗೊಂಡ ಈ ಹೊಸ ಸುಸಜ್ಜಿತ ಕಟ್ಟಡ “ಶತಮಾನೋತ್ಸವ ಸಂಕೀರ್ಣ” ಲೋಕಾರ್ಪಣೆ ಗೊಳ್ಳುತ್ತಿರುವುದು ಸಂಘದ ಸದಸ್ಯರುಗಳಾದ ನಮಗೆಲ್ಲಾ ಹೆಮ್ಮೆಯ ವಿಚಾರ. ಈಘಟನೆಯು ಮುಂಡಾಜೆ ಗ್ರಾಮದ ಅಭಿವೃದ್ಧಿ ಪಥದಲ್ಲಿ ಸುವರ್ಣಾಕ್ಷರಗಳಿಂದ ನಮೂದಿಸಬಹುದಾದ ಚಾರಿತ್ರಿಕ ಅಂಶ.

    2023

  • ವಾರದ ಸಂತೆ

    77 ರ ಸ್ವಾತಂತ್ರ್ಯೋತ್ಸವದ ಸವಿ ನೆನಪಿನಲ್ಲಿ ಸಂಘದ ಕೇಂದ್ರ ಕಛೇರಿ ವಠಾರದಲ್ಲಿ ಕೃಷಿಕರ ಮತ್ತು ಗ್ರಾಹಕರ ಅನುಕೂಲಕ್ಕಾಗಿ "ವಾರದ ಸಂತೆ" ಆರಂಭಿಸಲಾಗಿದ್ದು, ಪ್ರತೀ ಬುಧವಾರ ಸಂತೆ ನಡೆಯಲಿದೆ.

    2023