ಪ್ರಶಸ್ತಿಗಳು ಮತ್ತು ಮನ್ನಣೆ

ದಿವಂಗತ N.S ಗೋಖಲೆಯವರು ನಮ್ಮ ಸಂಘದ ಅಧ್ಯಕ್ಷರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದು ಅವರ ಹೆಸರಿನಲ್ಲಿ ಸಂಘವು ಸಂಸ್ಮರಣಾ ನಿಧಿಯನ್ನು ಆರಂಭಿಸಿದ್ದು SSLC, PUC ಯಲ್ಲಿ ಶೇಕಡಾ ೯೦ ಕ್ಕಿಂತ ಹೆಚ್ಚು ಅಂಕಗಳಿಸಿದ ನಮ್ಮ ಸಂಘದ ಸದಸ್ಯರ ಮಕ್ಕಳನ್ನು ವಾರ್ಷಿಕ ಮಹಾ ಸಭೆಯಲ್ಲಿ ಗೌರವಿಸುತ್ತಿದ್ದೇವೆ.


  • ಸಂಘದ ಸಾಧನೆಗೆ ಸಾಧನಾ ಪ್ರಶಸ್ತಿ

    ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮುಂಡಾಜೆ 2012 ರಿಂದ 2023 ಸತತ ರ ವರೆಗೆ ಸತತ 12 ವರ್ಷ ಶೇ.100 ಸಾಲ ಮರುಪಾವತಿ ಮಾಡಿದ ಸಾಧನೆ ಮಾಡಿದ್ದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಕೊಡಮಾಡುವ ಸಾಧನಾ ಪ್ರಶಸ್ತಿಗೆ ಪಾತ್ರವಾಗಿದೆ.

    2023

  • ರಬ್ಬರ್ ಪುರಸ್ಕಾರ

    ನಮ್ಮ ಸಂಘವು ೨೦೦೫ ರಿಂದ ನೆರಿಯ ಮತ್ತು ಕಕ್ಕಿಂಜೆ ಶಾಖೆಯಲ್ಲಿ ರಬ್ಬರ್ ಸೊಸೈಟಿ ಉಜಿರೆಯ ಏಜೆಂಟ್ ಆಗಿ ರಬ್ಬರ್ ಖರೀದಿಸುತ್ತಿದ್ದು ಸತತವಾಗಿ ಅತಿ ಹೆಚ್ಚು ರಬ್ಬರ್ ಖರೀದಿ ಕೇಂದ್ರವೆಂಬ ಮನ್ನಣೆ ಪಡೆದು ಪ್ರತಿ ವರ್ಷ ಪುರಸ್ಕೃತಗೊಳ್ಳುತ್ತಿದೆ.

    ಬೆಳೆಗಾರರನ್ನು ಪ್ರೋತ್ಸಾಹಿಸುವ ದೃಷ್ಠಿಯಿಂದ, ಅತ್ಯಧಿಕ ರಬ್ಬರ್ ಹಾಗೂ ಅಡಿಕೆ ಹಾಕುವ ರೈತರನ್ನು ಪ್ರತಿವರ್ಷ ವಾರ್ಷಿಕ ಮಹಾಸಭೆಯಲ್ಲಿ ಗೌರವಿಸುತ್ತಿದ್ದೇವೆ.

    2023