ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ)
Mundaje Primary Agricultural Credit Co-operative Society Ltd.
Reg. No.5609
(ಸಹಕಾರಿಯ ಶೇರುದಾರ ಸದಸ್ಯರ ಮಾಹಿತಿಗಾಗಿ)
ಬೆಳ್ತಂಗಡಿ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ, ಈ ಸಂಸ್ಥೆ 100 ವರ್ಷಗಳ ಸಾರ್ಥಕ ಸೇವೆಯನ್ನು ಸಹಕಾರ ರಂಗದಲ್ಲಿ ಪೂರೈಸಿ, ಶತಮಾನೋತ್ಸವವನ್ನು ಆಚರಿಸಿ ಇದರ ಸವಿನೆನಪಿಗಾಗಿ ಸೋಮಂತ್ತಡ್ಕದಲ್ಲಿ ಶತಮಾನೋತ್ಸವ ಸಂಕೀರ್ಣ "ಮೃತ್ಯುಂಜಯ"ವನ್ನು ಲೋಕಾರ್ಪಣೆಗೊಳಿಸಿದೆ. ಪ್ರಸ್ತುತ ನಮ್ಮ ಸಂಸ್ಥೆ ನಿರಂತರ ಸೇವೆಯೊಂದಿಗೆ 105 ವರ್ಷಗಳನ್ನು ಪೂರೈಸಿರುವುದು ಅಭಿನಂದನೀಯ. ನಮ್ಮ ಸಹಕಾರಿ ಸಂಸ್ಥೆ ನಿರಂತರವಾಗಿ ಸೇವಾ ಚಟುವಟಿಕೆಯಲ್ಲಿ ಗುರುತಿಸಿಕೊಂಡು ತನ್ನ ಸದಸ್ಯ ವರ್ಗಕ್ಕೆ ಅತ್ಯಾಧುನಿಕ ಗುಣಮಟ್ಟದ ಸೇವೆಯನ್ನು ನೀಡಿ ಶತಮಾನೋತ್ಸವವನ್ನು ಆಚರಿಸುವುದು ಸಂಸ್ಥೆಯ ಸೇವಾ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ರೈತಾಪಿ ಸದಸ್ಯರ ಆರ್ಥಿಕ ಅವಶ್ಯಕತೆಗೆ ಸ್ಪಂದಿಸುತ್ತಿರುವ ಈ ಸಂಸ್ಥೆ ಸೇವಾ ಮನೋಭಾವದಿಂದ ಗ್ರಾಹಕರ ಅನುಕೂಲಕ್ಕಾಗಿ ಶತಮಾನೋತ್ಸವದ ಸವಿನೆನಪಿನಲ್ಲಿ ಕೃಷಿಯಂತ್ರೋಪಕರಣ ಮಳಿಗೆ ಆರಂಭಿಸಿದೆ.
ನಮ್ಮ ಹೆಮ್ಮೆಯ ಮುಂಡಾಜೆ ಪಾಕ್ಸ್ ಗೆ 105 ವರ್ಷಗಳ ಇತಿಹಾಸವಿದೆ. ಸಂಸ್ಥೆಯ ಆರಂಭದ ಅಧ್ಯಕ್ಷರು ದಿ। ಶ್ರೀ N.P. ಖಾಡಿಲ್ಕರ್ ಹಾಗೂ ಸ್ಥಾಪಕ ಗೌರವ ಕಾರ್ಯದರ್ಶಿ ದಿ। ಶ್ರೀ ಭಿಡೆ ನಾರಾಯಣ ಭಟ್ ಮತ್ತು ಅಂದಿನ ಆಡಳಿತ ಮಂಡಳಿಯ ದೂರದರ್ಶಿತ್ವದ ಕಾರಣ ಇಂದು ನಮ್ಮ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ. 6 ಗ್ರಾಮಗಳ ವ್ಯಾಪ್ತಿಯ ಈ ಸಂಸ್ಥೆ ಸುಮಾರು 6071, "A" ಕೆಟಗರಿ ಸದಸ್ಯರನ್ನು ಹೊಂದಿರುತ್ತದೆ. 77 ಕೋಟಿ ಠೇವಣಾತಿ ಹೊಂದಿರುತ್ತದೆ. ಮತ್ತು 114 ಕೋಟಿ ಸಾಲವನ್ನು ಸದಸ್ಯರಿಗೆ ನೀಡಿ ಕಳೆದ 13 ವರ್ಷಗಳಿಂದ 100% ಮರುಪಾವತಿ ಆಗಿರುತ್ತದೆ.
ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಸಹಕಾರ ತತ್ವದಡಿ ಪರಸ್ಪರ ದುಡಿಯೋಣ, ಭವ್ಯ ಭಾರತದ ನಿರ್ಮಾಣಕ್ಕೆ ನಮ್ಮಿಂದಾಗುವ ಕೊಡುಗೆ ನೀಡೋಣ.
|| ಸಹಕಾರಂ ಗೆಲ್ಗೆ, “ಜೈ ಸಹಕಾರಿ”||
ಶ್ರೀ ಪ್ರಕಾಶ ನಾರಾಯಣ ಕೆ
ಅಧ್ಯಕ್ಷರು
ಮುಂಡಾಜೆ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮುಂಡಾಜೆ 2024-25 ಸಾಲಿನಲ್ಲಿ ಶೇ.100 ಸಾಲ ವಸೂಲಾತಿ ಮಾಡಿದ ಸಾಧನೆ ಮಾಡಿದ್ದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಕೊಡಮಾಡುವ ಸಾಧನಾ ಪ್ರಶಸ್ತಿಗೆ ಪಾತ್ರವಾಗಿದೆ.
ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ.) ನೂರರ ಸಂಭ್ರಮ - ಸ್ಮರಣ ಸಂಚಿಕೆ 2021